ಈ ಪುಟವು ನಮ್ಮ ಮೆಟ್ರೋ ಅಥವಾ ಬೆಂಗಳೂರು ಮೆಟ್ರೋದ ನಿಲ್ದಾಣಗಳನ್ನು ಪಟ್ಟಿ ಮಾಡುತ್ತದೆ. ನಮ್ಮ ಮೆಟ್ರೋ ಬೆಂಗಳೂರು ನಗರಕ್ಕೆ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಿದೆ. ಜೂನ್ ೨೦೧೭ರ ವೇಳೆಗೆ ಸಂಪೂರ್ಣಗೊಂಡ ಮೊದಲ ಹಂತದ ಮೆಟ್ರೋ ಜಾಲವು ಒಟ್ಟು ೪೨ ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ. ಭಾರತದ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ, ಕೋಲ್ಕತ್ತಾ ಮತ್ತು ದೆಹಲಿ ಮೆಟ್ರೋಗಳ ನಂತರದ ಸ್ಥಾನದಲ್ಲಿದೆ. ನಮ್ಮ ಮೆಟ್ರೋದ ಮೊದಲ ಭಾಗವು (ನೇರಳೆ ವಲಯ) ೨೦ ಅಕ್ಟೋಬರ್ ೨೦೧೧ರಂದು ಮಹಾತ್ಮ ಗಾಂಧಿ ರಸ್ತೆ ಮತ್ತು ಬೈಯ್ಯಪ್ಪನಹಳ್ಳಿ ನಡುವೆ ಸಂಚಾರ ಮಾರ್ಗ ಆರಂಭಿಸಿತು. ೧೬ ನವೆಂಬರ್ ೨೦೧೫ರಂದು ಇದೇ ನೇರಳೆ ವಲಯಕ್ಕೆ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಮೆಟ್ರೋ ಮಾರ್ಗ ಸೇರ್ಪಡೆಗೊಂಡಿತು. ೨೯ ಏಪ್ರಿಲ್ ೨೦೧೬ರಂದು ಕಾರ್ಯಾರಂಭಗೊಂಡ ಕಬ್ಬನ್ ಪಾರ್ಕ್ ಮತ್ತು ನಗರ ರೈಲ್ವೆ ನಿಲ್ದಾಣಗಳ ನಡುವಿನ ೪.೮ ಕಿ.ಮೀ. ಉದ್ದದ ಸುರಂಗ ಮಾರ್ಗದೊಂದಿಗೆ ನೇರಳೆ ವಲಯದ ಮಾರ್ಗವು ಸಂಪೂರ್ಣಗೊಂಡಿತು. ನಮ್ಮ ಮೆಟ್ರೋ ವ್ಯವಸ್ಥೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿ‍ ಎಮ್‍ ಆರ್ ಸಿ ಎಲ್) ನಿರ್ವಹಿಸುತ್ತಿದೆ. ನಮ್ಮ ಮೆಟ್ರೋದ ಪ್ರತೀ ವಲಯವನ್ನು ಒಂದೊಂದು ಬಣ್ಣದಿಂದ ಗುರುತಿಸಲ್ಪಟ್ಟಿದೆ. ಮೆಟ್ರೋ ವ್ಯವಸ್ಥೆಯು ಸ್ಟಾಂಡರ್ಡ್ ಗೇಜಿನ ಹಳಿಗಳನ್ನು ಬಳಸುತ್ತಿದ್ದು, ಹಳಿಗಳನ್ನು ನೆಲಮಟ್ಟ, ಸುರಂಗಮಾರ್ಗ ಹಾಗೂ ಉನ್ನತ ಸ್ಥರಗಳಲ್ಲಿ ಸ್ಥಾಪಿಸಲಾಗಿದೆ. ಮೆಟ್ರೋ ಸೇವೆಗಳು ಬೆಳಗಿನ ಜಾವ ೫ರಿಂದ ರಾತ್ರಿ ೧೧ ಘಂಟೆಯವರೆಗೂ ಲಭ್ಯವಿರಲಿದ್ದು, ದಿನನಿತ್ಯ ಸರಾಸರಿ ೫೦,೦೦೦ಕ್ಕೂ ಹೆಚ್ಚು ಪ್ರಯಾಣಿಕರನ್ನು ತಲುಪಲಿವೆ. ನೇರಳೆ ಮಾರ್ಗವು ಪಶ್ಚಿಮದಲ್ಲಿ ಮೈಸೂರು ರಸ್ತೆ ಮತ್ತು ಪೂರ್ವದಲ್ಲಿ ಬೈಯ್ಯಪ್ಪನಹಳ್ಳಿಯನ್ನು ಸಂಪರ್ಕಿಸಿದರೆ, ಹಸಿರು ಮಾರ್ಗವು ಉತ್ತರದಲ್ಲಿ ನಾಗಸಂದ್ರ ಮತ್ತು ದಕ್ಷಿಣದಲ್ಲಿ ಪುಟ್ಟೇನಹಳ್ಳಿಯನ್ನು ಸಂಪರ್ಕಿಸುತ್ತದೆ. == ನಿಲ್ದಾಣಗಳು == === ಹಸಿರು ಮಾರ್ಗ === === ನೇರಳೆ ಮಾರ್ಗ === } == ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳುಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತ ಜಾಲತಾಣ 2017-07-26 ವೇಬ್ಯಾಕ್ ಮೆಷಿನ್ ನಲ್ಲಿ. == == ಇವನ್ನೂ ನೋಡಿನಮ್ಮ ಮೆಟ್ರೊ ==